Zoo Authority Of Karnataka

  • Home
  • Zoo Authority Of Karnataka

Zoo Authority Of Karnataka Charitable Society registered under Society's Act, responsible for Ex-situ Conservation activities in the state.

Conservation Education, Rescue, Relief and Rehabilitation of Wild animals.

ಆನೆ ಗಳು  ಸೇವಿಸುವ ಆಹಾರದ  ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಮ್ಮ ಸಿಬ್ಬಂದಿ ವರ್ಗ ಹಾಗೂ ಸ್ವಯಂಸೇವಾ ಕಾರ್ಯಕರ್ತರು ಕಾರ್ಯಕ್ರಮ  ಹಮ್ಮಿಕೊಂ...
23/06/2022

ಆನೆ ಗಳು ಸೇವಿಸುವ ಆಹಾರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಮ್ಮ ಸಿಬ್ಬಂದಿ ವರ್ಗ ಹಾಗೂ ಸ್ವಯಂಸೇವಾ ಕಾರ್ಯಕರ್ತರು ಕಾರ್ಯಕ್ರಮ ಹಮ್ಮಿಕೊಂಡರು.

ಹೇಗೆ ಆನೆಗಳು ಆಹಾರ

ಸೇವಿಸಿ ವಿಸರ್ಜನೆ ಮಾಡುವ ಸಗಣಿ ಇಂದ "ಬೀಜ ಪ್ರಸರಣ" ಉಂಟಾಗುತ್ತದೆ,

ಸಗಣಿ ಹಾಗೂ ಕಾಲು ಗುರುತಿ ನಿಂದ ಪತ್ತೆ ಮಾಡುವ ವಿಧಾನ

ಏಷ್ಯಾ ಹಾಗೂ ಆಫ್ರಿಕಾ ಆನೆ ಗಳಿಗೆ ಇರುವ ವ್ಯತ್ಯಾಸ

ಕಪಿಗಳು ,ಪಕ್ಷಿಗಳು ಕರಡಿ ಮುಂತಾದ ಪ್ರಾಣಿಗಳು ಹೇಗೆ ಬೀಜ ಪ್ರಸರಣ ಮಾಡಿ ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳಲು ಸಹಕಾರ ನೀಡುತ್ತಿವೆ

ಮುಂತಾದ ವಿಷಯಗಳನ್ನು ವಿವರಿಸಿದರು .

Awareness session conducted by staff and volunteer on diet of elephants at the zoo, their role in seed dispersal through their dung and identification through dung and foot print. Difference between Asian and African Elephant was also explained as well as role of other animals such as monkeys, birds and bears in seed dispersal to maintain a balance in the ecosystem.

23/06/2022
ಇಂದು "ವಿಶ್ವ ಪರಿಸರ ದಿನಾಚರಣೆ " ಅಂಗವಾಗಿ, "ಇರುವುದು ಒಂದೇ ಭೂಮಿ" ಎಂಬ  ವಿಷಯ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ...
08/06/2022

ಇಂದು "ವಿಶ್ವ ಪರಿಸರ ದಿನಾಚರಣೆ " ಅಂಗವಾಗಿ, "ಇರುವುದು ಒಂದೇ ಭೂಮಿ" ಎಂಬ ವಿಷಯ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ವಿವಿಧ ರೀತಿಯ ಚಟುವಟಿಕೆ ಹಮ್ಮಿಕೊಂಡು, ಪ್ರಾಣಿ ಸಂಕುಲ ರಕ್ಷಣೆ, ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ಗೊಬ್ಬರ ತಯಾರಿಕೆ ಇತ್ಯಾದಿ ಗಳನ್ನು, "ಸಾಹಸ "ಮತ್ತು "ವಿಶ್ವ ವನ್ಯಜೀವಿ ಧನ " ಸಹಯೋಗದೊಂದಿಗೆ ,ಮನಮುಟ್ಟುವ ಪ್ರಯತ್ನ ಮಾಡಲಾಯಿತು.
ಸಂದರ್ಶಕ ರು ವನ್ಯಜೀವಿ ಸಂರಕ್ಷಣಾ ಪ್ರತಿಜ್ಞೆ ಕೈಗೊಂಡು ,ಆಟಗಳ ಮೂಲಕ ತ್ಯಾಜ್ಯ ವಿಂಗಡಣೆ ಅರಿವು ಪಡೆದರು.
J.P. ನಗರ, EKYA ಶಾಲಾ ವಿದ್ಯಾರ್ಥಿಗಳು ,
ಮೃಗ ಆಲಯ ದ ಆವರಣದಲ್ಲಿ ಸ್ಥಳಿಯ ತಳಿ ಸಸಿಗಳನ್ನು ನೆಟ್ಟು ,ಜೀವ ವೈವಿಧ್ಯ ಕಾಪಾಡುವ ನಿಟ್ಟಿನಲ್ಲಿ ಸಹಕಾರ ನೀಡಿದರು.
ಮೃಗ ಆಲಯ ದ ಸಭಾಂಗಣದಲ್ಲಿ "ವನ್ಯಜೀವಿ ಹಾಗೂ ಪ್ರಕೃತಿ ರಕ್ಷಣೆ " ಕುರಿತಾದ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
Awareness session conducted as part of World Environment Day, along the theme of "Only One Earth".
Various activities were conducted to impart message on the need to conserve different species of fauna as well as ways to follow a sustainable lifestyle through waste segregation and composting in association with Saahas and World Wildlife Fund.
Visitors also took a wildlife pledge and learnt waste segregation through games.
Students from Ekya school, J P Nagar, also took part in a tree planting drive of native tree species in the zoo premises to support local biodiversity.
Additional wildlife and nature conservation theme movies were played in the zoo auditorium.

ಹಾವುಗಳ ಬಗ್ಗೆ ಅರಿವು ಮೂಡಿಸುವ  ಕಾರ್ಯಕ್ರಮ* ನಾಲ್ಕು ವಿಧದ ದೊಡ್ಡ ಹಾವುಗಳು.*ಯಾವ ಹಾವು ಎಂದು ಕಂಡುಹಿಡಿಯುವುದು.*ಹಾವುಗಳ ಬಗೆಗಿನ ಸತ್ಯಗಳು ಹಾ...
16/05/2022

ಹಾವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ

* ನಾಲ್ಕು ವಿಧದ ದೊಡ್ಡ ಹಾವುಗಳು.

*ಯಾವ ಹಾವು ಎಂದು ಕಂಡುಹಿಡಿಯುವುದು.

*ಹಾವುಗಳ ಬಗೆಗಿನ ಸತ್ಯಗಳು ಹಾಗೂ ಮಿಥ್ಯೆಗಳು.

*ಹಾವುಕಚ್ಚಿದಾಗ ಏನು ಮಾಡಬೇಕು-ಏನು ಮಾಡಬಾರದು.

*ಹಾವುಗಳ ಮಹತ್ವ,

ಹಾಗೂ ಅವುಗಳ ಸಂರಕ್ಷಣೆ.

*ಹಾವಿನ "ಬೆನ್ನುಮೂಳೆಯ" ಪ್ರದರ್ಶನ.

Awareness program on snakes

*Big four snakes

*Identification of snakes

* snake myths n fact

*snake bite dos and don't

*importance of snakes and conservation

*Display of snake vertebrae

ಇತ್ತೀಚೆಗೆ ಮುಕ್ತಾಯಗೊಂಡ "ವಿಶ್ವ ಗೊಬ್ಬರದ ಮಹತ್ವ" ಸಪ್ತಾಹ"(1 ರಿಂದ7 ಮೇ), ತದನಂತರದ ಆಚರಣೆ,ಶಿವಮೊಗ್ಗ ಮೃಗಾಲಯದಲ್ಲಿ,ಸಂದರ್ಶಕರಿಗಾಗಿ ಏರ್ಪಡಿ...
15/05/2022

ಇತ್ತೀಚೆಗೆ ಮುಕ್ತಾಯಗೊಂಡ "ವಿಶ್ವ ಗೊಬ್ಬರದ ಮಹತ್ವ" ಸಪ್ತಾಹ"(1 ರಿಂದ7 ಮೇ), ತದನಂತರದ ಆಚರಣೆ,

ಶಿವಮೊಗ್ಗ ಮೃಗಾಲಯದಲ್ಲಿ,

ಸಂದರ್ಶಕರಿಗಾಗಿ ಏರ್ಪಡಿಸಲಾಗಿತ್ತು.

2022 ರ ಗುರಿ. "ಗೊಬ್ಬರದ ಉಪಯೋಗ ಮತ್ತು ಉತ್ಪಾದನೆ" ಹೆಚ್ಚಳ. ಗೊಬ್ಬರದ ಸರಿಯಾದ ಉಪಯೋಗದಿಂದ "ಹೆಚ್ಚು ಉತ್ಪಾದನಾ ಕೃಷಿಯ" ಬಗ್ಗೆ ಈಗ ನೀಡುತ್ತಿರುವ ಮಹತ್ವ,

ಹಾಗೂ, ಯಾವ ರೀತಿ, ಸಾವಯವ ಗೊಬ್ಬರಗಳು ಈ ಗುರಿ ಹೊಂದಲು ಸಹಾಯ ಮಾಡುತ್ತದೆ, ಎಂಬುದನ್ನು ವಿವರಿಸಲಾಯಿತು.

ಈ ಕೆಳಗಿನ ವಿಷಯಗಳಲ್ಲಿ ಸಂದರ್ಶಕರು ಕಲಿಯುವ ಆಸಕ್ತಿ ತೋರಿಸಿದರು.

ಅನುಪಯುಕ್ತ ಆಹಾರ ಪದಾರ್ಥಗಳನ್ನು ಉಪಯೋಗಿಸಿ ಗೊಬ್ಬರ ಮಾಡುವುದು.

ಇದರಿಂದ ಅನುಪಯುಕ್ತ ಆಹಾರದ ಮರುಬಳಕೆ ಆಗಿ,"ಹಸಿರು ಮನೆ ಅನಿಲ"ದ ಹೊರಸೂಸುವಿಕೆ ಕಡಿಮೆಯಾಗುವಿಕೆಯ ಹಾಗೂ ಅನಿಲದಿಂದಾಗುವ ವಾತಾವರಣದ ಮೇಲಿನ ಪ್ರತಿಕೂಲ ಪರಿಣಾಮದ ಬಗ್ಗೆ ತಿಳುವಳಿಕೆ ಪಡೆದರು.

ಉಪಯೋಗಿಸದೆ ಬಿಟ್ಟಲ್ಲಿ, ಪ್ರತಿಶತ 8 ರಿಂದ 10 ರವರೆಗೆ ಪ್ರಪಂಚದ "ಹಸಿರು ಮನೆ ಅನಿಲ ಹೊರಸೂಸು" ಹೆಚ್ಚಾಗುವಿಕೆ,

ಭೂಮಿ ಹಾಗೂ ನೀರಿನ ಹೆಚ್ಚು ಬಳಕೆಯಿಂದ "ಜೀವ ವೈವಿಧ್ಯತೆ" ಮೇಲಿನ ಒತ್ತಡ ಹೆಚ್ಚಾಗುವಿಕೆ ಮುಂತಾದ ವಿಷಯಗಳ ತಿಳುವಳಿಕೆ ಪಡೆದರು.

ಗೊಬ್ಬರ ದ ಬಗ್ಗೆ ವಿವರಣೆ ನೀಡಿ,ಅದರಿಂದ ಸಿಗುವ ಲಾಭಗಳು,ತಯಾರಿಸುವ ವಿಧಾನ ತಿಳಿಸಿಕೊಡಲಾಯಿತು.

ಚಟುವಟಿಕೆ ಅಂಗವಾಗಿ,

"ನನ್ನ ಗೊಬ್ಬರದ ಡಬ್ಬ"

ತಯಾರಿಸಿ ಉಪಯೋಗಿಸುವ ವಿಧಾನ ತಿಳಿಸಿಕೊಡಲಾಯಿತು.

International Compost Awareness week (1-7 may)post celebration for visitors .

The 2022 theme(Recipe for regeneration) highlights the overall regenerative agriculture movement and how compost and organics recycling fit into that process.

Visitors become interested in learning about the following points.

*Reducing the impact of waste food by feeding the soil and composting. Reducing food waste, composting also helps to reduce greenhouse gas emissions that affect climate change. Food loss and waste generate an estimated 8-10 per cent of global greenhouse gas emissions while using land and water resources increasingly put pressure on biodiversity.

*what is compost

*benefits of compost

*how to get started

* Activity (my compost bin )

ಬೇಸಿಗೆ ಶಿಬಿರದಲ್ಲಿ ಕೊನೆಯ (ಮೂರನೇ) ದಿನದ ಚಟುವಟಿಕೆ ಗಳುಬೆಳಗಿನ ಚಟುವಟಿಕೆಪ್ರೊ. ಸಿ. ಎಸ್. ಅರಸನಲ್. ( ವನ್ಯಜೀವಿ ವಾರ್ಡನ್, ಗದಗ್) ಅವರಿಂದ ...
14/05/2022

ಬೇಸಿಗೆ ಶಿಬಿರದಲ್ಲಿ ಕೊನೆಯ (ಮೂರನೇ) ದಿನದ ಚಟುವಟಿಕೆ ಗಳು

ಬೆಳಗಿನ ಚಟುವಟಿಕೆ
ಪ್ರೊ. ಸಿ. ಎಸ್. ಅರಸನಲ್. ( ವನ್ಯಜೀವಿ ವಾರ್ಡನ್, ಗದಗ್) ಅವರಿಂದ
"ಪ್ರಾಣಿಗಳ ನಡವಳಿಕೆ ಗಮನಿಸುವಿಕೆ" ಹಾಗೂ
"ಕಪ್ಪತ್ತಗುಡ್ಡ ವನ್ಯಜೀವಿ ಅಭಯಾರಣ್ಯ" ದ ಬಗ್ಗೆ ಉಪನ್ಯಾಸ.
ಮಧ್ಯಾಹ್ನ
"ಪರೋಕ್ಷ ಸಾಕ್ಷಿಗಳ" ಆಧಾರದಿಂದ ಪ್ರಭೇಧಗಳ ಗುರುತಿಸುವಿಯ ಮಹತ್ವ, ಪ್ಲಾಸ್ಟರ್ ಆಫ್ ಪ್ಯಾರಿಸ್ ಉಪಯೋಸುವಿಕೆ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಿ,

"ಪ್ರಮಾಣ ಪತ್ರಗಳನ್ನು" ವಿತರಿಸಲಾಯಿತು.

Last day of summer camp(3rd day): Morning session included Animal Behaviour Observation& a talk on ' Kappatgudda Wildlife Sanctuary' by Prof C S Arasanal ( Hon Wildlife Warden ,Gadag ). Second session included a talk on 'importance of indirect evidences in species identification' , POP Casting & a documentary show. The program was ended with certificate distribution

ಗದಗ್ ಮೃಗಾಲಯದ ಲ್ಲಿ ಇಂದು, "ಗದಗ್ ಮೃಗಾಲಯದ" ED&DCF ಅವರಿಂದ,"ಬೇಸಿಗೆ ಶಿಬಿರ" ಉದ್ಘಾಟಿಸಲ್ಪಟ್ಟಿತು.ಮೊದಲ ದಿನವಿದ್ಯಾರ್ಥಿಗಳನ್ನು ಕರೆದುಕೊಂಡ...
13/05/2022

ಗದಗ್ ಮೃಗಾಲಯದ ಲ್ಲಿ ಇಂದು, "ಗದಗ್ ಮೃಗಾಲಯದ"

ED&DCF ಅವರಿಂದ,

"ಬೇಸಿಗೆ ಶಿಬಿರ" ಉದ್ಘಾಟಿಸಲ್ಪಟ್ಟಿತು.

ಮೊದಲ ದಿನ

ವಿದ್ಯಾರ್ಥಿಗಳನ್ನು ಕರೆದುಕೊಂಡು, ಅವರುಗಳಿಗೆ, ಮೃಗಾಲಯದ ಆಸ್ಪತ್ರೆ ಹಾಗೂ ಉಗ್ರಾಣ ವನ್ನು

ತೋರಿಸಿ, ಪ್ರಾಣಿಗಳ ಆರೋಗ್ಯ ಕಾಪಾಡುವಿಕೆ, ನೀಡಬೇಕಾದ ಪುಷ್ಟಿಯುತ ಆಹಾರ,ಎಷ್ಟು ಪ್ರಮಾಣದಲ್ಲಿ ನೀಡಬೇಕು, ಎಲ್ಲದರ ಮಾಹಿತಿ ನೀಡಲಾಯಿತು.

ಎರಡನೆಯ ಕಾರ್ಯಕ್ರಮ ದ ಅಂಗವಾಗಿ,

ಪ್ರಾಣಿಗಳ ಆವಾಸಸ್ಥಾನ ದ ಮಹತ್ವ ಹಾಗೂ ಪುಷ್ಟಿಯುತ ಆಹಾರ ನೀಡುವಿಕೆ ಬಗ್ಗೆ, ವಿವರಣೆ ನೀಡಿ, ಪಾಠ ವನ್ನು ಹೇಳಿಕೊಡಲಾಯಿತು.

Today summer camp was inaugurated by ED& DCF Gadag Zoo.

Day:1 - Students were taken for a visit to zoo hospital & Store. They were taught about health care management in zoo animals, animal diet & nutrition. In second session they were taught about the ' importance of habitat & feeding enrichment'.

ಸನ್ಮಾನ್ಯ ಜನಪ್ರಿಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ. ಎಸ್. ಈಶ್ವರಪ್ಪ, ಉಸ್ತುವಾರಿ ಸಚಿವರು ಚಿಕ್ಕಮಗಳೂರು ಅವರು ಇಂ...
17/03/2022

ಸನ್ಮಾನ್ಯ ಜನಪ್ರಿಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ. ಎಸ್. ಈಶ್ವರಪ್ಪ, ಉಸ್ತುವಾರಿ ಸಚಿವರು ಚಿಕ್ಕಮಗಳೂರು ಅವರು ಇಂದು, ಶಿವಮೊಗ್ಗ ಮೃಗಾಲಯದ "ಹುಲಿ ಮತ್ತು ಸಿಂಹ ಸಫಾರಿ"ಯ ಸುಮಾರು ನಾಲ್ಕು ಕೋಟಿ ವೆಚ್ಚದ, ಎರಡು
ಕಿ.ಮಿ. ರಸ್ತೆಯ ಶಂಕುಸ್ಥಾಪನೆ ನೆರವೇರಿಸಿದರು.
Sri K.S Eshwarappa ,honorable minister for rural development and punchayath raj Karnataka state government and incharge minister of chikmanglore dist, laid foundation stone for 2km zoo road at tiger and lion safari shivamogga.
Project cost is Rs 400 lakhs

"ವಿಶ್ವ ವನ್ಯಜೀವಿ ದಿನ" ವನ್ನು, ಶಿವಮೊಗ್ಗ ಮೃಗಾಲಯದಲ್ಲಿ ಆಚರಿಸಲಾಯಿತು.P. E .S. ಶಾಲೆಯ ಸುಮಾರು 100 ವಿದ್ಯಾರ್ಥಿಗಳು  ಇದರಲ್ಲಿ ಭಾಗವಹಿಸಿದರ...
07/03/2022

"ವಿಶ್ವ ವನ್ಯಜೀವಿ ದಿನ" ವನ್ನು, ಶಿವಮೊಗ್ಗ ಮೃಗಾಲಯದಲ್ಲಿ ಆಚರಿಸಲಾಯಿತು.
P. E .S. ಶಾಲೆಯ ಸುಮಾರು 100 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು.

ವನ್ಯಜೀವಿ ಸಂರಕ್ಷಕ,
ಶ್ರೀ ವಿನಾಯಕ್ ಎಸ್ ಜಿ, ಅವರು, ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ,ವಿವಿಧ ಮುಖ್ಯ ತಳಿಗಳ ಕಾಪಾಡುವಿಕೆ ಕುರಿತಂತೆ ಮಾತನಾಡಿದರು.
ನಂತರದಲ್ಲಿ, ಸಾಕ್ಷ್ಯ ಚಿತ್ರ ವೀಕ್ಷಣೆ, ಮೃಗಾಲಯದ ವೀಕ್ಷಣೆ ಹಾಗೂ ಸಫಾರಿ ಏರ್ಪಡಿಸಲಾಗಿತ್ತು.

Wildlife day celebration zoo
About 100 students from PES school, shivamogga took part in the conservation talk on "Recovering key species for habitat restoration" by Vinayak

SG (wildlife conservationist) followed by documentry, zoo rounds and safari trip.

ಝೀಬ್ರಾ ಮತ್ತು ಜಿರಾಫೆ ಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ನಮ್ಮ ಸ್ವಯಂಸೇವಕ ಸಿಬ್ಬಂದಿ ಸಹಕಾರದೊಂದಿಗೆ"ಶೈಕ್ಷಣಿಕ ಚಟುವಟಿಕೆ"...
28/02/2022

ಝೀಬ್ರಾ ಮತ್ತು ಜಿರಾಫೆ ಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ನಮ್ಮ ಸ್ವಯಂಸೇವಕ ಸಿಬ್ಬಂದಿ ಸಹಕಾರದೊಂದಿಗೆ"ಶೈಕ್ಷಣಿಕ ಚಟುವಟಿಕೆ" ಹಮ್ಮಿಕೊಳ್ಳಲಾಯಿತು.
ಸಂದರ್ಶಕ ರಿಗೆ, ಝೀಬ್ರಾ ಹಾಗೂ ಜಿರಫ್ ಗಳ ವಿವಿಧ ತಳಿಗಳು, ಉಪ ತಳಿಗಳು , ಅವುಗಳನ್ನು ಗುರುತಿಸುವ ವಿಧಾನ, ಕಾಡಿನಲ್ಲಿ ಅವುಗಳು ಎದುರಿಸುತ್ತಿರುವ ಅಪತ್ತು, "ಹಿಕ್ಕೆ ಹಾಗೂ ಹೆಜ್ಜೆ" ಗುರುತುಗಳನ್ನು ನೋಡಿ ತಳಿ ಗುರುತಿಸುವಿಕೆ ಮುಂತಾದವುಗಳನ್ನು ವಿವರಿಸಲಾಯಿತು.

ಸಂದರ್ಶಕರು , "ಆಫ್ರಿಕಾನ ವಿಭಾಗ" ದಲ್ಲಿ, ಪ್ರಾಣಿಗಳ 3D ಆಕೃತಿ ಯೊಂದಿಗೆ "ಛಾಯಾಚಿತ್ರ" ತೆಗೆದುಕೊಂಡರು,
FlippAR Go app ನಲ್ಲಿ ಆಫ್ರಿಕಾದ ಗೊರಸುಳ್ಳ (UNGULATES) ಪ್ರಾಣಿ ತಳಿ ಗಳ ವಿಡಿಯೋ ವೀಕ್ಷಿಸಿದರು.
Educational activity was conducted to public along with our Volunteer, about Zebras and Giraffes. Visitors were given information about the different species of Zebra and Giraffe, how to differentiate between the different species and sub- species, threats faced by the animals in wild and identifying different ungulates through droppings and foot print.
Along with this public took photos with the 3D animals using AR signage board of the Africana section on the FlippAR Go app, which also has an educative video about the African ungulates of BBP.

ಶಿವಮೊಗ್ಗ ಮೃಗಾಲಯದಲ್ಲಿ ಇಂದು , ಮೃಗಾಲಯದ ನಿರ್ವಹಣೆ" ಕುರಿತಂತೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.zoo quiz (questions related t...
04/01/2022

ಶಿವಮೊಗ್ಗ ಮೃಗಾಲಯದಲ್ಲಿ ಇಂದು , ಮೃಗಾಲಯದ ನಿರ್ವಹಣೆ" ಕುರಿತಂತೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
zoo quiz (questions related to zoo management) zoo.

BIG CATS  ಎಂದೇ ಗುರಿತಿಸಲ್ಪಡುವ "ಹುಲಿ" ಗಳ ನಡವಳಿಕೆ ಹಾಗೂ ಅವುಗಳ ವಿಶಿಷ್ಟತೆ ಗಳನ್ನು ಸಂದರ್ಶಕ-ಸಾರ್ವಜನಿಕ ರೊಂದಿಗೆ,ಸಂವಾದಿಸಿ ಅರಿವು ಮೂಡಿ...
27/12/2021

BIG CATS ಎಂದೇ ಗುರಿತಿಸಲ್ಪಡುವ "ಹುಲಿ" ಗಳ ನಡವಳಿಕೆ ಹಾಗೂ ಅವುಗಳ ವಿಶಿಷ್ಟತೆ ಗಳನ್ನು ಸಂದರ್ಶಕ-ಸಾರ್ವಜನಿಕ ರೊಂದಿಗೆ,ಸಂವಾದಿಸಿ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದು ಪ್ರಯೋಗ.

A public interactive session on 'Behaviour and peculiarities of big cats' was conducted at gadag zoo.

Address


Alerts

Be the first to know and let us send you an email when Zoo Authority Of Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Zoo Authority Of Karnataka:

  • Want your business to be the top-listed Pet Store/pet Service?

Share