Amruthadhara Goushala Bajakudlu, Perla.

Amruthadhara Goushala Bajakudlu, Perla. Kasaragod Breed Conservation Charitable Trust (Re)
(7)

10/03/2024
ವಿಭೂತಿ ತಯಾರಿಗಾಗಿ ಗೋಮಯ ಜ್ವಲನ|ಅಮೃತಧಾರಾ ಗೋಶಾಲೆ ಬಜಕೂಡ್ಳು.ವೀಡಿಯೋ ದೃಶ್ಯ - spkitchenshttps://youtu.be/Rf-R3yAGJp8
17/02/2022

ವಿಭೂತಿ ತಯಾರಿಗಾಗಿ ಗೋಮಯ ಜ್ವಲನ|ಅಮೃತಧಾರಾ ಗೋಶಾಲೆ ಬಜಕೂಡ್ಳು.
ವೀಡಿಯೋ ದೃಶ್ಯ - spkitchens
https://youtu.be/Rf-R3yAGJp8

12/02/2022
30/10/2020

ಹರೇ ರಾಮ

ಅಮೃತಧಾರಾ ಗೋಶಾಲೆಯಲ್ಲಿ ವರ್ಷಾವಧಿ ತಂಬಿಲ ಸೇವೆ ಮತ್ತು ದುರ್ಗಾಪೂಜೆಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ...
30/05/2019

ಅಮೃತಧಾರಾ ಗೋಶಾಲೆಯಲ್ಲಿ ವರ್ಷಾವಧಿ ತಂಬಿಲ ಸೇವೆ ಮತ್ತು ದುರ್ಗಾಪೂಜೆ

ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಕಾಸರಗೋಡು ಪೆರ್ಲ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ 22.05.2019 ರಂದು ಸ್ಥಳದ ದೈವಗಳಿಗೆ ವರ್ಷಾವಧಿ ತಂಬಿಲ ಸೇವೆ ಹಾಗು ರಾತ್ರಿ ದುರ್ಗಾಪೂಜೆ ಜರಗಿದವು.
ಮಹಾಮಂಡಲ ಧರ್ಮಕರ್ಮ ಸಹಕಾರ್ಯದರ್ಶಿ ವೇ. ಮೂ. ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ಎಣ್ಮಕಜೆ ವಲಯ ಸಂಸ್ಕಾರ ಪ್ರದಾನ ಡಾ. ಸದಾಶಿವ ಭಟ್ಟ ಪೆರ್ಲ ಇವರ ಸಹಾಯದೊಂದಿಗೆ ಕಾರ್ಯಕ್ರಮವು ಜರಗಿತು.
ಈ ಸಂದರ್ಭದಲ್ಲಿ ಬಜಕೂಡ್ಲು ಗೋಶಾಲೆಯ ಸಂಘಟನಾ ಕಾರ್ಯದರ್ಶಿಗಳಾದ ವಿನಯಕೃಷ್ಣ ಹಾಗು ಪರಿಮಳಾ ದಂಪತಿಗಳು ತಮ್ಮ ಮಗ ವಿಹಾನ್ ಕೃಷ್ಣನ 8 ನೇ ವರ್ಷದ ಜನ್ಮ ದಿನವನ್ನು ಗೋಶಾಲೆಯಲ್ಲಿ ಗೋಪೂಜೆ ಮಾಡಿ ಗೋವುಗಳಿಗೆ ಗೋಗ್ರಾಸ ನೀಡಿ ಗೋಶಾಲೆಯ ಕಾರ್ಯಕರ್ತರೊಂದಿಗೆ ಆಚರಿಸಿದರು.

✍ ಉಲ್ಲೇಖ ಎಣ್ಮಕಜೆ

20/05/2019

ಹಲಸುಮೇಳ - ಹಲಸು ಬೆಳೆಸಿ ಗೋವು ಉಳಿಸಿ
ಶ್ರೀ ಭಾರತೀ ವಿದ್ಯಾ ಪೀಠ ಬದಿಯಡ್ಕ, ಕಾಸರಗೋಡು, 08.06.2019

* ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು
" ಹಲಸುಮೇಳ " ಸಾಮಾರಂಭದ ಬಗ್ಗೆ ಸಮಾಜಕ್ಕೆ ನೀಡುವ ಸಂದೇಶ

HareRaama SriSri  #ಸೌರಯುಗಾದಿ ವಿಷು ಹಬ್ಬದ ಶುಭಾಶೀರ್ವಾದಗಳು.ಹೊಸ ವರುಷವು ಹೊಸ ಆನಂದ, ನೆಮ್ಮದಿ, ಆರೋಗ್ಯ, ಉತ್ಸಾಹ ತರಲಿ. ಶುಭವಾಗಲಿ.
15/04/2019

HareRaama SriSri

#ಸೌರಯುಗಾದಿ ವಿಷು ಹಬ್ಬದ ಶುಭಾಶೀರ್ವಾದಗಳು.

ಹೊಸ ವರುಷವು ಹೊಸ ಆನಂದ, ನೆಮ್ಮದಿ, ಆರೋಗ್ಯ, ಉತ್ಸಾಹ ತರಲಿ. ಶುಭವಾಗಲಿ.

ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಮಹಾಶಿವರಾತ್ರಿ ಮಹೋತ್ಸವ04.03.2019ಅಮೃತಧಾರಾ ಗೋಶಾಲೆ ಗೋಲೋಕ ಬಜಕೂಡ್ಲವಿನ ಗೋವರ್ಧನ ಧರ್ಮಮಂದಿರದಲ್ಲಿ ದಿನಾ...
09/03/2019

ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಮಹಾಶಿವರಾತ್ರಿ ಮಹೋತ್ಸವ
04.03.2019
ಅಮೃತಧಾರಾ ಗೋಶಾಲೆ ಗೋಲೋಕ ಬಜಕೂಡ್ಲವಿನ ಗೋವರ್ಧನ ಧರ್ಮಮಂದಿರದಲ್ಲಿ ದಿನಾಂಕ 4-3-2019 ನೇ ಸೋಮವಾರ ಸಾಯಂಕಾಲ ಘಂಟೆ 5 ರಿಂದ ಮಹಾಶಿವರಾತ್ರಿ ಮಹೋತ್ಸವವನ್ನು ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ| ಮೂ | ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ಶಿವಪೂಜೆ, ಎಣ್ಮಕಜೆ ವಲಯದ ಹತ್ತು ಮಂದಿ ರುದ್ರದ್ಯಾಯಿಗಳಿಂದ ರುದ್ರಪಾರಾಯಣ, ಶಿವಪಂಚಾಕ್ಷರೀ ಮಂತ್ರಜಪ ಹಾಗೂ ವಿಭೂತಿ ತಯಾರಿಗಾಗಿ ಬೆರಣಿ ಉರಿಸುವ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಮುಳ್ಳೇರಿಯಾ ಮಂಡಲ ವಿಧ್ಯಾರ್ಥಿ ವಾಹಿನಿ ಪ್ರಧಾನ ಕೇಶವಪ್ರಸಾದ ಎಡಕ್ಕಾನ ಇವರು ಗೋಪೂಜೆ ನಡೆಸುಮೂಲಕ ತಮ್ಮ ಜನ್ಮದಿನವನ್ನು ಸಕುಟುಂಬಿಕರಾಗಿ ಗೋಶಾಲೆಯಲ್ಲಿ ಆಚರಿಸಿದರು.
ಮುಳ್ಳೇರಿಯಾ ಮಂಡಲ ಕಾರ್ಯದರ್ಶಿಗಳು, ಎಣ್ಮಕಜೆ ವಲಯ ಪದಾಧಿಕಾರಿಗಳು, ಗೋಶಾಲೆ ಪದಾಧಿಕಾರಿಗಳು ಹಾಗು ಗೋಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾದರು.

RamachandrapuraMatha ವ್ಯಕ್ತಿ-ವ್ಯಕ್ತಿಯೂ ಅರಿವಿನಗ್ನಿಯ ಹಣತೆಯಾದರೆ ಸಮಾಜವೇ ದೀಪಾವಳಿ! ಅದು ನಿತ್ಯದೀಪಾವಳಿ; ಸತ್ಯದೀಪಾವಳಿ! #ಶ್ರೀಸೂಕ್ತಿ ...
07/11/2018

RamachandrapuraMatha
ವ್ಯಕ್ತಿ-ವ್ಯಕ್ತಿಯೂ ಅರಿವಿನಗ್ನಿಯ ಹಣತೆಯಾದರೆ ಸಮಾಜವೇ ದೀಪಾವಳಿ! ಅದು ನಿತ್ಯದೀಪಾವಳಿ; ಸತ್ಯದೀಪಾವಳಿ!

#ಶ್ರೀಸೂಕ್ತಿ #ದೀಪಾವಳಿ

ಅಮೃತಧಾರಾ ಗೋಶಾಲೆಯಲ್ಲಿ ಸ್ವರ್ಣಗೌರಿ ಪೂಜೆ ಸಂಪನ್ನವಾಯಿತು➖ ➖➖➖➖➖➖➖➖➖➖ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ ವಲಯದ ಬಜಕೂಡ್ಲು ಅಮೃತಧಾರಾ ಗೋಶಾಲ...
22/09/2018

ಅಮೃತಧಾರಾ ಗೋಶಾಲೆಯಲ್ಲಿ ಸ್ವರ್ಣಗೌರಿ ಪೂಜೆ ಸಂಪನ್ನವಾಯಿತು
➖ ➖➖➖➖➖➖➖➖➖➖
ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ ವಲಯದ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ 12/09/2018 ರಂದು ಸಂಜೆ ಎಣ್ಮಕಜೆ ವಲಯದ ನೇತೃತ್ವದಲ್ಲಿ ಸ್ವರ್ಣಗೌರಿ ಪೂಜೆಯು ಸಂಪನ್ನವಾಯಿತು.
ಧರ್ಮ ಕರ್ಮ ವಿಭಾಗದ ಸಹ ಕಾರ್ಯದರ್ಶಿ ಶ್ರೀಯುತ ವೇದಮೂರ್ತಿ ಕೂಟೇಲು ಕೇಶವಪ್ರಸಾದ ಇವರು ಪೂಜಾ ಕೈಂಕರ್ಯ ನೆರವೇರಿಸಿದರು. ಶಂಕರನಾರಾಯಣ ಪ್ರಕಾಶ ಅಬರಾಜೆ ದಂಪತಿಗಳಿಂದ ಸ್ವರ್ಣಗೌರಿ ಪೂಜೆ ನಡೆಯಿತು.
ಮಾತೃ ವಿಭಾಗದ ನೇತೃತ್ವದಲ್ಲಿ ಕುಂಕುಮಾರ್ಚನೆ, ಭಜನೆ, ಇತ್ಯಾದಿ ಕಾರ್ಯಕ್ರಮಗಳು ನಡೆದವು.
ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಮುಳ್ಳೇರಿಯಾ ಮಂಡಲ ಮಾತೃ ಪ್ರದಾನೆ ಕುಸುಮ ಪೆರ್ಮುಖ ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನಿ ವಿಭಾಗದ ಕೇಶವ ಪ್ರಸಾದ ಎಡೆಕ್ಕಾನ, ಎಣ್ಮಕಜೆ ವಲಯ ಕಾರ್ಯದರ್ಶಿಗಳಾದ ಶಂಕರ ಪ್ರಸಾದ ಕುಂಚಿನಡ್ಕ, ವಿವಿಧ ವಲಯಗಳ ಪದಾಧಿಕಾರಿಗಳು, ಗುರಿಕ್ಕಾರರು ಹಾಗೂ ಮಾತೆಯರು ಭಾಗವಹಿಸಿದ್ದರು.

➖➖➖➖➖➖➖🙏

22/09/2018
ಗೋವರ್ಧನ ಯಾಗಮಂಟಪಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಗೋವರ್ಧನ ಯಾಗಮಂಟಪ ನಿರ್ಮಾಣ
22/09/2018

ಗೋವರ್ಧನ ಯಾಗಮಂಟಪ

ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಗೋವರ್ಧನ ಯಾಗಮಂಟಪ ನಿರ್ಮಾಣ

ಮಹಾನಂದಿ ಗೋಲೊಕ15.06.2018ಕರ್ನಾಟಕ ರಾಜ್ಯ ಗೋಪರಿವಾರ ಹಾಗೂ ಹೊಸನಗರ ತಾಲೂಕು ಗೋಪರಿವಾರಗಳ ಸಂಯುಕ್ತಾಶ್ರಯದಲ್ಲಿ ಮಹಾನಂದಿ ಗೋಲೋಕದಲ್ಲಿ ಗವ್ಯೋತ್...
22/09/2018

ಮಹಾನಂದಿ ಗೋಲೊಕ
15.06.2018

ಕರ್ನಾಟಕ ರಾಜ್ಯ ಗೋಪರಿವಾರ ಹಾಗೂ ಹೊಸನಗರ ತಾಲೂಕು ಗೋಪರಿವಾರಗಳ ಸಂಯುಕ್ತಾಶ್ರಯದಲ್ಲಿ ಮಹಾನಂದಿ ಗೋಲೋಕದಲ್ಲಿ ಗವ್ಯೋತ್ಪನ್ನ ತರಬೇತಿ ಶಿಬಿರ

~
ಜೂನ್‌ ೧೫ರಂದು ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಮಹಾನಂದಿ ಗೋಲೊಕದಲ್ಲಿ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮೂರು ದಿನಗಳ ಗವ್ಯೋತ್ಪನ್ನ ತರಬೇತಿ ಶಿಬಿರವು ಸಾಮೂಹಿಕ ಗೋಪೂಜೆಯೊಂದಿಗೆ ಉದ್ಘಾಟನೆ.

೨೫ ಜನ ಗೋಪರ ಕಾಳಜಿ ಉಳ್ಳವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಜ್ಞಾನವನ್ನು ಪಡೆದು ಸಂತೋಷದಿಂದ ಮರಳಿದರು.

ಭಾರತೀಯ ಗೋಪರಿವಾರದ ಶ್ರೀಸಂಸ್ಥಾನದವರ ಕಾರ್ಯದರ್ಶಿಗಳಾದ ಮಧು ಗೋಮತಿ ಅವರು ಸ್ವಾಗತಿಸಿ ಶಿಬಿರದ ಸ್ವರೂಪವನ್ನು ತಿಳಿಸಿದರು.

ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯದ ಸಂಘಟನಾ ಕಾರ್ಯದರ್ಶಿಗಳಾದ ಮಹೇಶ್ ಚಟ್ನಳ್ಳಿ ಅವರು ಆಶಯ ಭಾಷಣ.

ನಿವೇದನಾ, ಸುಚರಣ, ತೈಲ, ವಿಭೂತಿ, ಗೋಮಯ ಖಂಡ, ದಂತ ಮಂಜನ, ಸುಕಾಂತಿ ಫೇಸ್ ಪ್ಯಾಕ್, ಅಗರಬತ್ತಿ, ಪಂಚಗವ್ಯ ಘೃತ, ನಿರ್ಮಲಗಂಗಾ ಸಾಬೂನು ಇನ್ನಿತರ ಉತ್ಪನ್ನಗಳ ಕುರಿತು ಸುಲೋಚನಕ್ಕ, ಶಾಂತಕ್ಕ, ಸೀತಕ್ಕ ಅವರುಗಳು ಮಾಹಿತಿ ನೀಡಿ ತಯಾರಿಸುವ ಪ್ರಾತ್ಯಕ್ಷಿಕೆ ತೋರಿಸಿದರು.

ಕನಕಪುರ ಭಾಗದ ಗೌತಮ್ ಎಂಬುವವರು ನರನಾಡಿ ಚಿಕಿತ್ಸೆಯ ಮೂಲಕ ಗೋವುಗಳ ಹಾಲಿನ ಪ್ರಮಾಣ ವೃದ್ಧಿಸುವುದು, ಹಲವು ರೋಗಗಳಿಗೆ ಗಿಡಮೂಲಿಕೆ ಔಷಧಿಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು‌.

ಎರೆಹುಳು ಗೊಬ್ಬರ ಘಟಕಕ್ಕೆ ಭೇಟಿ ನೀಡಿ ಗೊಬ್ಬರ ತಯಾರಿಕೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಶಿಬಿರಾರ್ಥಿಗಳು ಪಡೆದರು.

ಖ್ಯಾತ ಭೂತಜ್ಞ, ಗವ್ಯಾಧಾರಿತ ಕೃಷಿ ತಜ್ಞ ಶ್ರೀಯುತ ಬನಗದ್ದೆ ರಾಘವೇಂದ್ರ ಅವರು ಗೋಮಯ(ಸಗಣಿ) ಮತ್ತು ಗೋಮೂತ್ರ(ಗಂಜಲ) ಗಳನ್ನು ಬಳಸಿಕೊಂಡು ಉತ್ತಮ ಕೃಷಿ ವಿಧಾನಗಳನ್ನು ಶಿಬಿರಾರ್ಥಿಗಳಿಗೆ ವಿವರಿಸಿದರು. ಜೀವಾಮೃತ, ಘನ ಜೀವಾಮೃತ ಹಾಗೂ ಬೀಜಾಮೃತಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆ ತೋರಿಸಿದರು.

ಕರ್ನಾಟಕ ರಾಜ್ಯ ಗೋಪರಿವಾರದ ಗವ್ಯಚಿಕಿತ್ಸೆ ವಿಭಾಗದ ರಾಜ್ಯಾಧ್ಯಕ್ಷ ಡಾ|| Ravi N Murthy ಅವರು ಸವಿವರವಾಗಿ ಶ್ರೀ ಗುರುಗಳ ಉದ್ದೇಶ,‌ ಶಿಬಿರದ ಕಲ್ಪನೆಯನ್ನು ಸಭೆಗೆ ಪ್ರಸ್ತುತಪಡಿಸಿದರು. ಉತ್ಪನ್ನಗಳ ಬಳಕೆ ಮತ್ತು ಉಪಯೋಗದ ಕುರಿತು ಸಂವಾದ ನಡೆಸಿ ಶಿಬಿರಾರ್ಥಿಗಳಿಗಿದ್ದ ಗೊಂದಲಗಳನ್ನು ಪರಿಹರಿಸಿದರು.

ಮಧು ಗೋಮತಿ ನಿರ್ವಹಿಸಿದರು. ಹೊಸನಗರ ತಾಲೂಕು ಗೋಪರಿವಾರದ ಕಾರ್ಯಾಲಯ ಕಾರ್ಯದರ್ಶಿ ಸ್ವಾತಿ ಇವರು ಸಹರಿಸಿದರು.

ಭಾರತೀಯ ಗೋಪರಿವಾರದ ಶ್ರೀಸಂಸ್ಥಾನದವರ ಸಹಕಾರ್ಯದರ್ಶಿ ಶಿಶಿರ್ ಹೆಗಡೆ ಶಿಬಿರದ ಕುರಿತು ಅವಲೋಕಿಸಿ, ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಗವ್ಯೋತ್ಪನ್ನಗಳ ಪ್ರಯೋಜನ ಪಡೆಯಬೇಕು ಆ ಮೂಲಕ ದೇಸಿ ಗೋತಳಿಗಳ ಸಂರಕ್ಷಣೆ~ಸಂವರ್ಧನೆಯಲ್ಲಿ ಸಮಸ್ತ ಗೋಪ್ರೇಮಿಗಳು ಸಹಕರಿಸಬೇಕು ಎಂದು ಕೋರಿದರು.

Address

P. O. PERLA , Kasaragod Dist State
Kasaragod

Website

Alerts

Be the first to know and let us send you an email when Amruthadhara Goushala Bajakudlu, Perla. posts news and promotions. Your email address will not be used for any other purpose, and you can unsubscribe at any time.

Videos

Share

Category