22/09/2018
ಮಹಾನಂದಿ ಗೋಲೊಕ
15.06.2018
ಕರ್ನಾಟಕ ರಾಜ್ಯ ಗೋಪರಿವಾರ ಹಾಗೂ ಹೊಸನಗರ ತಾಲೂಕು ಗೋಪರಿವಾರಗಳ ಸಂಯುಕ್ತಾಶ್ರಯದಲ್ಲಿ ಮಹಾನಂದಿ ಗೋಲೋಕದಲ್ಲಿ ಗವ್ಯೋತ್ಪನ್ನ ತರಬೇತಿ ಶಿಬಿರ
~
ಜೂನ್ ೧೫ರಂದು ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಮಹಾನಂದಿ ಗೋಲೊಕದಲ್ಲಿ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮೂರು ದಿನಗಳ ಗವ್ಯೋತ್ಪನ್ನ ತರಬೇತಿ ಶಿಬಿರವು ಸಾಮೂಹಿಕ ಗೋಪೂಜೆಯೊಂದಿಗೆ ಉದ್ಘಾಟನೆ.
೨೫ ಜನ ಗೋಪರ ಕಾಳಜಿ ಉಳ್ಳವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಜ್ಞಾನವನ್ನು ಪಡೆದು ಸಂತೋಷದಿಂದ ಮರಳಿದರು.
ಭಾರತೀಯ ಗೋಪರಿವಾರದ ಶ್ರೀಸಂಸ್ಥಾನದವರ ಕಾರ್ಯದರ್ಶಿಗಳಾದ ಮಧು ಗೋಮತಿ ಅವರು ಸ್ವಾಗತಿಸಿ ಶಿಬಿರದ ಸ್ವರೂಪವನ್ನು ತಿಳಿಸಿದರು.
ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯದ ಸಂಘಟನಾ ಕಾರ್ಯದರ್ಶಿಗಳಾದ ಮಹೇಶ್ ಚಟ್ನಳ್ಳಿ ಅವರು ಆಶಯ ಭಾಷಣ.
ನಿವೇದನಾ, ಸುಚರಣ, ತೈಲ, ವಿಭೂತಿ, ಗೋಮಯ ಖಂಡ, ದಂತ ಮಂಜನ, ಸುಕಾಂತಿ ಫೇಸ್ ಪ್ಯಾಕ್, ಅಗರಬತ್ತಿ, ಪಂಚಗವ್ಯ ಘೃತ, ನಿರ್ಮಲಗಂಗಾ ಸಾಬೂನು ಇನ್ನಿತರ ಉತ್ಪನ್ನಗಳ ಕುರಿತು ಸುಲೋಚನಕ್ಕ, ಶಾಂತಕ್ಕ, ಸೀತಕ್ಕ ಅವರುಗಳು ಮಾಹಿತಿ ನೀಡಿ ತಯಾರಿಸುವ ಪ್ರಾತ್ಯಕ್ಷಿಕೆ ತೋರಿಸಿದರು.
ಕನಕಪುರ ಭಾಗದ ಗೌತಮ್ ಎಂಬುವವರು ನರನಾಡಿ ಚಿಕಿತ್ಸೆಯ ಮೂಲಕ ಗೋವುಗಳ ಹಾಲಿನ ಪ್ರಮಾಣ ವೃದ್ಧಿಸುವುದು, ಹಲವು ರೋಗಗಳಿಗೆ ಗಿಡಮೂಲಿಕೆ ಔಷಧಿಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.
ಎರೆಹುಳು ಗೊಬ್ಬರ ಘಟಕಕ್ಕೆ ಭೇಟಿ ನೀಡಿ ಗೊಬ್ಬರ ತಯಾರಿಕೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಶಿಬಿರಾರ್ಥಿಗಳು ಪಡೆದರು.
ಖ್ಯಾತ ಭೂತಜ್ಞ, ಗವ್ಯಾಧಾರಿತ ಕೃಷಿ ತಜ್ಞ ಶ್ರೀಯುತ ಬನಗದ್ದೆ ರಾಘವೇಂದ್ರ ಅವರು ಗೋಮಯ(ಸಗಣಿ) ಮತ್ತು ಗೋಮೂತ್ರ(ಗಂಜಲ) ಗಳನ್ನು ಬಳಸಿಕೊಂಡು ಉತ್ತಮ ಕೃಷಿ ವಿಧಾನಗಳನ್ನು ಶಿಬಿರಾರ್ಥಿಗಳಿಗೆ ವಿವರಿಸಿದರು. ಜೀವಾಮೃತ, ಘನ ಜೀವಾಮೃತ ಹಾಗೂ ಬೀಜಾಮೃತಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆ ತೋರಿಸಿದರು.
ಕರ್ನಾಟಕ ರಾಜ್ಯ ಗೋಪರಿವಾರದ ಗವ್ಯಚಿಕಿತ್ಸೆ ವಿಭಾಗದ ರಾಜ್ಯಾಧ್ಯಕ್ಷ ಡಾ|| Ravi N Murthy ಅವರು ಸವಿವರವಾಗಿ ಶ್ರೀ ಗುರುಗಳ ಉದ್ದೇಶ, ಶಿಬಿರದ ಕಲ್ಪನೆಯನ್ನು ಸಭೆಗೆ ಪ್ರಸ್ತುತಪಡಿಸಿದರು. ಉತ್ಪನ್ನಗಳ ಬಳಕೆ ಮತ್ತು ಉಪಯೋಗದ ಕುರಿತು ಸಂವಾದ ನಡೆಸಿ ಶಿಬಿರಾರ್ಥಿಗಳಿಗಿದ್ದ ಗೊಂದಲಗಳನ್ನು ಪರಿಹರಿಸಿದರು.
ಮಧು ಗೋಮತಿ ನಿರ್ವಹಿಸಿದರು. ಹೊಸನಗರ ತಾಲೂಕು ಗೋಪರಿವಾರದ ಕಾರ್ಯಾಲಯ ಕಾರ್ಯದರ್ಶಿ ಸ್ವಾತಿ ಇವರು ಸಹರಿಸಿದರು.
ಭಾರತೀಯ ಗೋಪರಿವಾರದ ಶ್ರೀಸಂಸ್ಥಾನದವರ ಸಹಕಾರ್ಯದರ್ಶಿ ಶಿಶಿರ್ ಹೆಗಡೆ ಶಿಬಿರದ ಕುರಿತು ಅವಲೋಕಿಸಿ, ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಗವ್ಯೋತ್ಪನ್ನಗಳ ಪ್ರಯೋಜನ ಪಡೆಯಬೇಕು ಆ ಮೂಲಕ ದೇಸಿ ಗೋತಳಿಗಳ ಸಂರಕ್ಷಣೆ~ಸಂವರ್ಧನೆಯಲ್ಲಿ ಸಮಸ್ತ ಗೋಪ್ರೇಮಿಗಳು ಸಹಕರಿಸಬೇಕು ಎಂದು ಕೋರಿದರು.